VAO ನೇಮಕಾತಿ 2026: 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಹತೆ, ವೇತನ, ಅರ್ಜಿ ದಿನಾಂಕ ಸಂಪೂರ್ಣ ಮಾಹಿತಿ
ರಾಜ್ಯ ಸರ್ಕಾರಿ ಉದ್ಯೋಗಕ್ಕಾಗಿ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕಂದಾಯ ಇಲಾಖೆಯ 572 ಗ್ರಾಮ ಆಡಳಿತ ಅಧಿಕಾರಿ (Village Administrative Officer – VAO) ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಶುಲ್ಕ, ವಿದ್ಯಾರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
VAO ನೇಮಕಾತಿ 2026 :
ಹುದ್ದೆಯ ವಿವರ
– ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
– ಇಲಾಖೆ: ಕಂದಾಯ ಇಲಾಖೆ – ಹುದ್ದೆ: ಗ್ರಾಮ ಆಡಳಿತ ಅಧಿಕಾರಿ (VAO)
– ಒಟ್ಟು ಹುದ್ದೆಗಳು: 572
– ಉದ್ಯೋಗ ಸ್ಥಳ: ಕರ್ನಾಟಕ
ವಿದ್ಯಾರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ PUC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ
– ಕನಿಷ್ಠ ವಯಸ್ಸು: 18 ವರ್ಷ
– ಸಾಮಾನ್ಯ ವರ್ಗ: 35 ವರ್ಷ
– OBC ಅಭ್ಯರ್ಥಿಗಳಿಗೆ: 3 ವರ್ಷ ವಯೋಮಿತಿ ಸಡಿಲಿಕೆ
– SC/ST ಅಭ್ಯರ್ಥಿಗಳಿಗೆ: 5 ವರ್ಷ ವಯೋಮಿತಿ ಸಡಿಲಿಕೆ
ಅರ್ಜಿ ಶುಲ್ಕ
– ಸಾಮಾನ್ಯ / OBC (2A, 2B, 3A, 3B): ₹750
– SC / ST / ಪ್ರವರ್ಗ-1: ₹500
– ಅಂಗವಿಕಲ ಅಭ್ಯರ್ಥಿಗಳು: ₹250
ವೇತನ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಾನುಸಾರ ₹34,100 ರಿಂದ ₹67,600 ವೇತನ ಶ್ರೇಣಿ ಹಾಗೂ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಸೇರಿದಂತೆ ಇತರೆ ಸೌಲಭ್ಯಗಳು ಲಭ್ಯವಾಗುತ್ತವೆ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಆಗಸ್ಟ್ 2026
VAO (ಗ್ರಾಮ ಆಡಳಿತ ಅಧಿಕಾರಿ) ನೇಮಕತಿಗೆ ಸಂಬಂಧಿಸಿದ ಉದ್ಯೋಗ ಮಾಹಿತಿಗಾಗಿ, ನೀವು ತಕ್ಷಣ ಈ ವೆಬ್ಸೈಟ್ https://cetonline.karnataka.gov.in/kea/ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ.
| Apply Link |
ಸೂಚನೆ: ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಿ. ತಪ್ಪಾದ ಮಾಹಿತಿಯ ಆಧಾರದ ಮೇಲೆ ಸಲ್ಲಿಸಿದ ಅರ್ಜಿಗಳಿಗೆ ಅಭ್ಯರ್ಥಿಗಳೇ ಹೊಣೆ. — Shiva Jobs & News – ಪ್ರಮುಖ ಸೂಚನೆ ಖಾಸಗಿ ಹಾಗೂ MNC ಉದ್ಯೋಗಗಳಿಗೆ ಯಾವುದೇ ನೇಮಕಾತಿ ಶುಲ್ಕ ಇರುವುದಿಲ್ಲ. ಯಾರಾದರೂ ಉದ್ಯೋಗ ಕೊಡಿಸುವ ಹೆಸರಿನಲ್ಲಿ ಹಣ ಕೇಳಿದರೆ ಅದು ವಂಚನೆಯಾಗಿರುವ ಸಾಧ್ಯತೆ ಇದೆ. ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ. Shiva Jobs & News ನಲ್ಲಿ ಪ್ರಕಟವಾಗುವ ಮಾಹಿತಿಯನ್ನು ಓದಿ ನಂತರವೇ ಅರ್ಜಿ ಸಲ್ಲಿಸಿ.